".

Header Ads

ಬೈಕ್‌ನ ವಿಷಕಾರಿ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣ!

 


ಮನೆಯೊಳಗೆ ನಿಲ್ಲಿಸಿದ್ದ ಬೈಕ್ ಇಂಜಿನ್‌ನಿಂದ ಹೊರಬಂದ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಸೇವಿಸಿದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಮನಕಲಕುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರಿನಲ್ಲಿ ಭಾನುವಾರ(ಮಾ.15) ನಡೆದಿದೆ.

ಮುರಳಿ ಎಂಬಾತ ತನ್ನ ಬೈಕ್ ರಿಪೇರಿ ಮಾಡಿಸಿದ್ದ, ಇಂಜಿನ್ ಸರಿಯಾಗಲು ರಾತ್ರಿಯಿಡೀ ಬೈಕ್ ಚಾಲನೆಯಲ್ಲಿಡುವಂತೆ ಮೆಕ್ಯಾನಿಕ್ ಸಲಹೆ ನೀಡಿದ್ದನು. ಅದರಂತೆ ಮುರಳಿ ಮನೆಯೊಳಗೆ ಬೈಕ್ ಸ್ಟಾರ್ಟ್ ಮಾಡಿ ಕಿಟಕಿ-ಬಾಗಿಲುಗಳನ್ನು ಮುಚ್ಚಿ ಮೇಲ್ಛಾವಣಿಯ ಮೇಲೆ ಮಲಗಲು ಹೋಗಿದ್ದರು.

ಬೈಕ್ ನಿಲ್ಲಿಸಿದ್ದ ಕೋಣೆಯಲ್ಲೇ ಮಲಗಿದ್ದ ಅಜ್ಜ ರಾಮಚಂದ್ರಯ್ಯ(70), ಮೊಮ್ಮಗ ಕಾರ್ತಿಕ್(15) ಮತ್ತು ಎಂಟು ವರ್ಷದ ಅವಳಿ ಹೆಣ್ಣುಮಕ್ಕಳಾದ ಚಂದನಾ ಹಾಗೂ ಚರಿತಾ ನಿದ್ರೆಯಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೈಕ್ ಮಾಲೀಕ ಮುರಳಿ ಮತ್ತು ಅವರ ಪತ್ನಿ ರೇವತಿ ಮನೆಯ ಮೇಲಿನ ಕೋಣೆಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಕೊರತೆಯಾಗಿ, ಬೈಕ್ ಹೊಗೆಯಿಂದ ಬಿಡುಗಡೆಯಾದ ಕಾರ್ಬನ್ ಮಾನಾಕ್ಸೈಡ್ ಇಡೀ ಮನೆಯನ್ನು ಆವರಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ .



Powered by Blogger.