".

Header Ads

ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

 


ಅಡುಗೆ ಅನಿಲದ ಅಕ್ರಮ ದಾಸ್ತಾನು ತಡೆಯಲು ಮತ್ತು ಎಲ್ಲರಿಗೂ ಸಮಾನವಾಗಿ ಗ್ಯಾಸ್ ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶೀಯ ಎಲ್‌ಪಿಜಿ ಸಿಲಿಂಡರ್  ಮರು ಬುಕಿಂಗ್‌ ಅವಧಿಯನ್ನು ಹೆಚ್ಚಿಸಿದೆ. ಸಿಲಿಂಡರ್ ರಿಫಿಲ್ ಬುಕ್ಕಿಂಗ್ ಮಾಡಲು ಇರುವ ಕನಿಷ್ಠ ಕಾಯುವ ಅವಧಿಯನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 

ಈ ಕ್ರಮದಿಂದ ಸಿಲಿಂಡರ್‌ಗಳ ಅತಿಯಾದ ಬುಕ್ಕಿಂಗ್ ಹಾಗೂ ಸಂಗ್ರಹಣೆ ನಿಯಂತ್ರಣವಾಗುವ ಜೊತೆಗೆ ಎಲ್ಲಾ ಗ್ರಾಹಕರಿಗೂ ಗ್ಯಾಸ್ ಸರಬರಾಜು ಸಮನಾಗಿ ತಲುಪಲು ಸಹಾಯವಾಗಲಿದೆ.ಈ ಹಿಂದೆ ಇದ್ದ 21 ದಿನಗಳ ಕನಿಷ್ಠ ಕಾಯುವ ಅವಧಿಯನ್ನು ಈಗ 25 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ, ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್‌ ಮಾಡಲು ಅವಕಾಶವಿರುತ್ತದೆ. ಗ್ಯಾಸ್ ಸಂಗ್ರಹಣೆ ತಡೆಯುವುದು ಮತ್ತು ಪೂರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಎಂದು ಮೂಲಗಳು ತಿಳಿಸಿವೆ.

 

 

Powered by Blogger.