".

Header Ads

ಪಿಯುಸಿ ಪರೀಕ್ಷೆ-02 ಕ್ಕೆ ನೋಂದಾಯಿಸಲು ವಿದ್ಯಾರ್ಥಿಗಳ ಪರದಾಡ

 


ಇದೆ ಬರುವ ಏಪ್ರಿಲ್ 30 ರಿಂದ ದ್ವಿತೀಯ ಪಿ ಯು ಸಿ ಪರೀಕ್ಷೆ-2 ನಡೆಯಲಿದೆ. ಈ ಪರೀಕ್ಷೆಗೆ ಆನ್ ಲೈನ್ ಮೂಲಕ ನೋಂದಾಯಿಸಲು ಏ.17 ಶುಕ್ರವಾರ ಕೊನೆಯ ದಿನ. ಆದರೆ ಕಳೆದ ಎಂಟು ದಿನಗಳಿಂದ ವೆಬ್ ಸೈಟ್ ತಾಂತ್ರಿಕ ತೊಂದರೆ ಯಿಂದಾಗಿ ಮೊಬೈಲ್ ರಿಜಿಸ್ಟರ್ ಮಾಡಲಾಗದೆ,OTP ಬಾರದೆ ಸೈಬರ್ ಸೆಂಟರ್ ನ ಮೂಲಕ ನೋಂದಾಯಿಸಲು ಸಾಧ್ಯವಾಗುತ್ತಿಲ್ಲ‌ ಎಂಬ ದೂರುಗಳು ಕೇಳಿ ಬರುತ್ತಿದೆ.

ಇತ್ತ ಆಪ್ ಲೈನ್ ನಲ್ಲಿ ಕಾಲೆಜಿನಲ್ಲಿ ನೋಂದಾಯಿಸಲು PU EXAM-2 ಪ್ರಾಂಶುಪಾಲರಿಗೆ ಲಾಗಿನ್ ಆಗಲು ಸಾಧ್ಯ ವಾಗದೆ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸ ಬೇಕಾದ ಬೋರ್ಡ್ ಗೊತ್ತಿದ್ದೂ, ಗೊತ್ತಿಲ್ಲದೆಯೋ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಪಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್ ನಿಂದ ಕಾಲೇಜಿಗೆ, ಕಾಲೇಜಿನಿಂದ ಸೈಬರ್ ಸೆಂಟರ್‌ಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಸರಕಾರವನ್ನು ಒತ್ತಾಯಿಸಿದ್ದಾರೆ.

Powered by Blogger.