".

Header Ads

ಉಡುಪಿ: ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳವು ; ಇಬ್ಬರು ಆರೋಪಿಗಳ ಬಂಧನ


 ಅಂತರ್-ರಾಜ್ಯ ಮನೆ ಕಳ್ಳತನದ ಮುಸುಕುಧಾರಿ ಟ್ಯಾಟೂ ಗ್ಯಾಂಗ್‌ ಕಳ್ಳರಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿ 7 ಲಕ್ಷದ 90 ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬೆಂಗಳೂರು ಸಿಂಗಸಂದ್ರದ ದರ್ಶನ್‌(21) ಮತ್ತು ದಾವಣಗೆರೆ ನಿವಾಸಿ ಚಂದ್ರು(26) ಎಂದು ಗುರುತಿಸಲಾಗಿದೆ.

ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋಡಾನ್‌ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಕಳವು ಮಾಡಿದ ಚಿನ್ನಾಭರಣಗಳನ್ನು ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ರೂಮ್‌ ನ್ನು ಮಾಡಿ ಇಟ್ಟಿರುವ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಚಿನ್ನದ ಕರಿಮಣಿ ಸರ , ಚಿನ್ನದ ನೆಕ್ಲೆಸ್‌ , ಚಿನ್ನದ ಕಿವಿಯೋಲೆ , ಚಿನ್ನದ ಚೈನ್‌ , ಸಹಿತ ಒಟ್ಟು 7,90,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೈಗಳಿಗೆ ಟ್ಯಾಟೂ 313 ಎಂಬ ಹಚ್ಚೆ ಹಾಕಿಕೊಂಡು ಟ್ಯಾಟೂ 313 ಗ್ಯಾಂಗ್‌ ಎಂಬ ಹೆಸರಿನಲ್ಲಿ ಗುರುತಿಸಿಕೊಂಡು ಕರ್ನಾಟಕ ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣದ ಹತ್ತಿರವಿರುವ ಮನೆಗಳನ್ನು ಗುರಿಯಾಗಿರಿಸಿ ರಾತ್ರಿ ವೇಳೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಕೈಗಳಿಗೆ ಗ್ಲೌಸ್‌ ಗಳನ್ನು ಧರಿಸಿ ಕಾಲಿಗೆ ಸಾಕ್ಸ್‌ ಗಳನ್ನು ಹಾಕಿಕೊಂಡು ಹಾಗೂ ಕೈಯಲ್ಲಿ ಮನೆಯ ಬಾಗಿಲು ಒಡೆಯಲು ಕಬ್ಬಿಣದ ಆಯುಧಗಳನ್ನು ಹಿಡಿದುಕೊಂಡು ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡುತ್ತಿದ್ದರು.ಆರೋಪಿಗಳು ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ಮನೆಯ ಅಮಿತ ಡ್ಯಾನಿಯಲ್ ಇವರ ಮನೆಗೆ ನುಗ್ಗಿ ಕಳವು ಕೃತ್ಯ ಎಸಗಿದ್ದರು.

ಮನೆಯಲ್ಲಿದ್ದ 75 ಗ್ರಾಂ ತೂಕದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುದ್ದು, ಅವರು ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Powered by Blogger.