".

Header Ads

ಪೋಷಕರಿಗೆ ಎಚ್ಚರಿಕೆ : ಕುರ್‌ಕುರೆ ತಂದ ದುರಂತ; ಪ್ಯಾಕೆಟ್‌ನಲ್ಲಿದ್ದ ಬಾಲ್‌ ನುಂಗಿ ಮಗು ಸಾವು

 


ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ತಿಂಡಿಗಳು, ಕುರ್‌ ಕುರೆ ಪ್ಯಾಕೆಟ್‌ಗಳು ಮಕ್ಕಳು ಬೇಗನೆ ಆಕರ್ಷಿಸುತ್ತದೆ. ಆದರೆ ಇಲ್ಲೊಂದು ಕಡೆ ಮಗುವೊಂದು ಇಷ್ಟ ಪಟ್ಟಿದ್ದ ಕುರ್‌ ಕುರೆ ಪ್ಯಾಕೆಟ್‌ನಿಂದಲೇ ದುರಂತ ಸಾವು ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರು  ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಶನಿವಾರ (ಆಗಸ್ಟ್‌ 2) ದುರಂತ ಘಟನೆಯೊಂದು ಬೆಳಕಿಗೆ ಬಂದಿಎ. ಮೂರು ವರ್ಷದ ಮಗು ಕುರ್‌ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿದ್ದು, ಆ ಬಾಲ್‌ ಗಂಟಲಿಗೆ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿದೆ   ಒಂದೆಡೆ ಈ ಘಟನೆಯಿಂದ ಸಂಪೂರ್ಣ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮತ್ತೊಂದೆಡೆ ಕುರ್‌ ಕುರೆ, ಇತರ ತಿಂಡಿಗಳನ್ನು ಕೊಡಿಸುವ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

Powered by Blogger.