ಮರೆಯಾದ ಕಂಬಳದ ಮಾಣಿಕ್ಯ
ಮೂಡಬಿದ್ರೆ : ಕಂಬಳವನ್ನೇ ಉಸಿರಾಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ಅದ್ಭುತ ಪ್ರತಿಭೆಗಳನ್ನು ಸೃಷ್ಟಿಸಿದ ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಹುಮಾನ ಪಡೆದ ಖ್ಯಾತಿಯ ಪಾಣಿಲ ಕಂಬಳದ ಯಜಮಾನ ಮೂಡಬಿದ್ರೆ ಇರುವೈಲು ಗ್ರಾಮದ ಪಾಣಿಲ ಬಾಡ ಪೂಜಾರಿ (82) ಅವರಿಂದು ನಿಧನ ಹೊಂದಿದರು.
ತಾಟೆ ಮತ್ತು ಬೊಟ್ಟಿಮಾರ್ ಕಂಬಳ ಕ್ಷೇತ್ರದಲ್ಲಿ ಬಹು ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದ ಮೃತರು ಉಸೈನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಹಾಗೂ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಆನಂದ ಅವರುಗಳು ಇವರ ಗರಡಿಯಲ್ಲಿ ಪಳಗಿದವರು.

Post a Comment