ಹೊಸದಾಗುವುದಾದರೆ...!
ಕಳೆದ ವರುಷದ ನಡೆಹಾದಿಯಲಿ
ಕಳೆದು ಹೋದವೆಷ್ಷೋ... ಹಿತವಾದವೆಷ್ಟೋ...!
ಕೆಲವೊಂದಾದರೂ ಮನವರಳಿಸಿರಬಹುದು.
ಹೊಸ ವರುಷದ ನಡೆಗೆ ಭರವಸೆ ಮೂಡಿಸಿರಬಹುದು
ಎರಡು ಸಾವಿರದ ಇಪ್ಪತ್ಮೂರರ ಪುಟಗಳಲಿ
ಏನಾದರೂ ಹೊಸದಾಗುವುದಾದರೆ
ಆ ಹೊಸತಿನೊಳು ಬದಲಾಗುವುದಾದರೆ...!
ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದು
ಕ್ರೌರ್ಯವಳಿದು ಮಾನವೀಯತೆ ಮೊಳೆಯಲಿ
ನಾನೆಂಬ ಅಹಂ ಮರೆತು ನಾವು ನಮ್ಮವರೆಂದು
ಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ
ಕಾರಣಗಳು ಸಂಬಂಧಗಳ ದೂರೀಕರಿಸದೆ
ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿ
ಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆ
ನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ
ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು
ಅಂತರ ನಿರಂತರವಾಗದಿರಲಿ
ಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವು
ಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ
ಈ ವರ್ಷದಲಿ ಹೊಸತು ಹೀಗೂ ಒಂದಿರಲಿ
ಈ ಸುಂದರ ಜಗತ್ತಿನಲಿ ಇರುವಷ್ಟು ದಿನ
ಈ ಬಾಳು ಹೂವಾಗಲಿ ನಗುವಾಗಲಿ
ಕ್ಷಣ ಕ್ಷಣಗಳು ಹಾಡಾಗಲಿ ಸವಿಜೇನಾಗಲಿ
ಸ್ನೇಹದಿಂದ ಸನ್ನಡತೆಯಿಂದ ಪ್ರೀತಿಯಿಂದ
ಹೊಸ ಹುರುಪಿನಿಂದ ಸಮರಸಭಾವದಿಂದ
ಮುಂದುವರಿಯುತಿರಲಿ ಬದುಕಿನ ಬಂಡಿ
























Post a Comment