ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ಯವರಿಗೆ "ಮಿಸ್ ಕ್ವೀನ್ ಆಫ್ ಇಂಡಿಯಾ" ಕಿರೀಟ
ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ಯವರು ಮಣಪುರಂ ಫೈನಾನ್ಸ್ ಆಯೋಜಿಸಿದ್ದ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಸ್ಪರ್ಧೆಯಲ್ಲಿ ಕನ್ನಡತಿ ಸಮೃದ್ದಿ ವಿ ಶೆಟ್ಟಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಇವರು ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ವಿಶ್ವನಾಥ್ ಶೆಟ್ಟಿ ಹಾಗೂ ಮಮತ ಶೆಟ್ಟಿ ಪುತ್ರಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಮೃದ್ದಿ ವಿ.ಶೆಟ್ಟಿ ಬ್ಯೂಟಿ ಪ್ಯಾಜೆಂಟ್ ಆಗಿಯೂ ಪ್ಯಾಶನ್ ಮುಂದುವರೆಸಿದ್ದಾರೆ.

Post a Comment