ಶ್ರೀ ಸಾಯಿನಾಥ ಮಿತ್ರ ಮಂಡಳಿಯ 16 ನೇ ವಾರ್ಷಿಕೋತ್ಸವ
ಚಿತ್ರ : ಧನಂಜಯ್ ಪೂಜಾರಿ.
ವರದಿ : ಇನ್ನಂಜೆ ಜಯರಾಮ್.
ಶ್ರೀ ಸಾಯಿನಾಥ್ ಮಿತ್ರ ಮಂಡಳಿ ಡೊಂಬಿವಲಿ ಇದರ 16 ನೇ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ಮಾರ್ಚ್ 5 ರ ರವಿವಾರದಂದು ಸಾಯಂಕಾಲ ಡೊಂಬಿವಲಿ ಪೂರ್ವ ಟಂಡನ್ ರೋಡ್ ನ ಠಾಕೂರ್ ಸಭಾಗ್ರಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮೊದಲಿಗೆ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಸಾಯನಾಥ ಮಿತ್ರ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿ ಪೂರ್ವವಲಯ ಸಮನ್ವಯಕ ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ರಂಗ ಕಲಾವಿದ ಹಾಗೂ ನಾಟಕ ಬರಹಗಾರ ನೀಲಧರ ವಿ. ಕರ್ಕೇರಾ, ಹೋಟೆಲ್ ಕಾರ್ಮಿಕ ಉಮಾನಾಥ್ ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು.
ತುಳು ಕನ್ನಡ ಚಿತ್ರ ನಟಿ ಕಾಜಲ್ ಕುಂದರ್, ಸಿ ಎ ಪ್ರಥಮ ಶ್ರೇಣಿ ಯಲ್ಲಿ ಪೂರೈಸಿದ ದಿಶಾ ಎಸ್ ಶೆಟ್ಟಿ ಯವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ್ ಶೆಟ್ಟಿ ಎಕ್ಕಾರು ರವರ ಅದ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷರಾದ ಇಂದ್ರಾಳಿ ದಿವಾಕರ್ ಶೆಟ್ಟಿ,
ಎಸ್. ಎಮ್. ಶೆಟ್ಟಿ ಕಾಲೇಜ್ ಪೊವಾಯಿಯ ವೈಸ್ ಪ್ರಿನ್ಸಿಪಾಲ್ ಸಂದೇಶ್ ಶೆಟ್ಟಿ ತಮ್ಮ ಅನಿಸಕೆಗಳನ್ನು ವ್ಯಕ್ತಡಿಸಿದರು.
ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ, ಭಾರತ್ ಬ್ಯಾಂಕಿನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಸ್ ಪಾಲನ್, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಧ್ಯಕ್ಷ ಸಚಿನ್ ಶೆಟ್ಟಿ, ಶ್ರೀ ಜಗದಾಂಬ ಮಂದಿರ ಡೊಂಬಿವಲಿಯ ಗೌ. ಪ್ರ. ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಸಮಾಜ ಸೇವಕಿ ಯಶೋಧಾ ನಾಯರ್, ಮಂಡಳಿಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಆನಂದ್ ಶೆಟ್ಟಿ ಎಕ್ಕಾರು ಅಧ್ಯಕ್ಷೀಯ ನುಡಿಗಳನ್ನಾಡುತ್ತ ಸಾಯಿನಾಥ್ ಮಿತ್ರ ಮಂಡಳಿ ಮಾಡುತ್ತಿರುವ ಕಾರ್ಯಗಳನ್ನು ಪ್ರಶಂಸಿದರು.
ಅಶ್ವಿನಿ ದೇವಾಡಿಗ, ಅಶೋಕ್ ದಾಸು ಶೆಟ್ಟಿ ಸಹಕರಿಸಿದರೆ, ಶಿಲ್ಪ ಸಂತೋಷ್ ಶೆಟ್ಟಿ, ಚಿನ್ಮಯ್ ಸಾಲ್ಯಾನ್, ರವಿ ಸನಿಲ್ ಕಾರ್ಯಕ್ರಮ ನಿರೂಪಸಿ, ವಂದಿಸಿದರು.
ಸಭಾ ಕಾರ್ಯ್ರಮದ ಮೊದಲು ಮಹಿಳೆಯರಿಗಾಗಿ ಹಳದಿಕುಂಕುಮ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ, ತುಳುನಾಡ ವೈಭವ, ತೆಲಿಕೆದ ಬರ್ಸೊಲು, ತುಳು ಹಾಸ್ಯ ನಾಟಕ "ಕುಸಲ್ದ ಅಜ್ಜಿ" ಪ್ರದರ್ಶನ ಗೊಂಡಿತು.
ಶ್ರೀ ಸಾಯಿನಾಥ ಮಿತ್ರ ಮಂಡಳಿಯ ಕಾರ್ಯಧ್ಯಕ್ಷ ಗಣೇಶ್ ಮೊಗವೀರ, ಅಧ್ಯಕ್ಷ ಮೋಹನ್ ಜಿ ಸಾಲ್ಯಾನ್, ಉಪಾದ್ಯಕ್ಷರುಗಳಾದ ಮೋಹನ್ ಪೂಜಾರಿ, ಆನಂದ್ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಸುರೇಶ್ ಮೊಗವೀರ, ಕೋಶಾಧಿಕಾರಿ ವಾಸು ಎಚ್ ಮೊಗವೀರ, ಜೊತೆ ಕಾರ್ಯದರ್ಶಿ ದಿನಕರ್ ಸಾಲ್ಯಾನ್, ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಸಹಕಾರ ದಿಂದ 16 ನೇ ವಾರ್ಷಿಕೋತ್ಸವವನ್ನು ವಿಜೃಂಣೆಯಿಂದ ಆಚರಿಸಿ ಕೊಂಡಿತು.

.jpeg)

.jpeg)


.jpeg)

.jpeg)
Post a Comment