ಡೊಂಬಿವಲಿ ಪೂರ್ವದ ಆಹಿರೇ ಗಾಂವ್ ನಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಸಂಪನ್ನ
ಚಿತ್ರ : ಧನಂಜಯ ಪೂಜಾರಿ.
ವರದಿ : ಇನ್ನಂಜೆ ಪೂಜಾರಿ.
ಡೊಂಬಿವಲಿ ಪೂರ್ವದ ಆಹಿರೇ ಗಾಂವ್ ನಲ್ಲಿರುವ ನಕುಲ್ ನಿವಾಸ್ ಮತ್ತು ದ್ವಾರಾಕನಾಥ್ ನಿವಾಸ್ ಪೂಜಾ ಸಮಿತಿಯ 28ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಶ್ರೀ ಶನೀಶ್ವರ ಗ್ರಂಥ ಪಾರಾಯಣವು ಮಾರ್ಚ್ 05 ರ ಆದಿತ್ಯವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಶ್ರದ್ದೆ ಭಕ್ತಿಯಿಂದ ನೆರವೇರಿತು.
ಆ ಪ್ರಯುಕ್ತ ಮುಂಜಾನೆ ಗಣಹೋಮ, ಶ್ರೀ ಸತ್ಯ ನಾರಾಯಣ ಪೂಜೆ, ಭಜನೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ನಂತರ ಹಿರಿಯ ಧಾರ್ಮಿಕ ಮುಖಂಡ ಜಗದೀಶ್ ಜೆ. ಕೋಟ್ಯಾನ್ ಅವರ ನೇತೃತ್ವದಲ್ಲಿ, ಪುರೋಹಿತ ಹರೀಶ್ ಶಾಂತಿ ಯವರ ಪೌರೋಹಿತ್ಯದಲ್ಲಿ ಶ್ರೀ ಶನೀಶ್ವರ ಕಲಶ ಪ್ರತಿಷ್ಠಾಪನೆ ನಡೆದು, ಮರಾಠಿ ಭಾಷೆಯಲ್ಲಿ ಶನಿಗ್ರಂಥ ಪಾರಾಯಣ ನಡೆಯಿತು. ಸಂಜೆ ಶ್ರೀ ಶನೀಶ್ವರ ದೇವರಿಗೆ ಮಹಾ ಮಂಗಳಾರತಿ ಬೆಳಗಲಾಯಿತು.
ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.
ಬಿಲ್ಲವರ ಅಸ್ಸೋಸಿಯಶನ್ ಮುಂಬಯಿಯ ಜೊತೆ ಕಾರ್ಯದರ್ಶಿ ರವಿ ಸನಿಲ್, ಬಿಲ್ಲವರ ಅಸ್ಸೋಸಿಯಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯದ್ಯಕ್ಷ ಶುಭಾಶ್ ಪಾಲನ್, ಉಪ ಕಾರ್ಯಾಧ್ಯಕ್ಷ ಶ್ರೀಧರ್ ಅಮೀನ್, ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಆನಂದ್ ಪೂಜಾರಿ, ಮಂಜಪ್ಪ ಪೂಜಾರಿ, ವೆಸ್ಟರ್ನ್ ಇಂಡಿಯಾ ಶನಿಪೂಜಾ ಸಮಿತಿಯ ಅಧ್ಯಕ್ಷ ರವಿ ಬಂಗೇರ, ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ಜೆಗಾಂವ್ ನ ಅಧ್ಯಕ್ಷ ರವಿ ಸುವರ್ಣ ಮತ್ತಿತರ ಗಣ್ಯರು, ಪೂಜೆಯಲ್ಲಿ ಪಾಲ್ಗೊಂಡಿದ್ದರು.
ನಕುಲ್ ನಿವಾಸ್ ಮತ್ತು ದ್ವಾರಾಕನಾಥ್ ನಿವಾಸ್ ಪೂಜಾ ಸಮಿತಿಯ ಕಾರ್ಯಕರ್ತರು ಪೂಜೆ ಸಾಂಗವಾಗಿ ನೆರವೇರುವಲ್ಲಿ ಸಹಕರಿಸಿದರು.


.jpeg)




Post a Comment