ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಸಮಿತಿಯ ಸಕ್ರಿಯ ಕಾರ್ಯಕರ್ತ ಗಂಜಿಮಠ ಮೊಗರು ಗುತ್ತು ದಯಾನಂದ ಶೆಟ್ಟಿ ನಿಧನ
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಹಲವಾರು ವರ್ಷಗಳಿಂದ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಗೈದು ಇಂದು ಶುಕ್ರವಾರ ತಾರೀಕು 10. 03. 2023 ರಂದು ಡೊಂಬಿವಲಿ ಪಶ್ಚಿಮದ ಠಾಕೂರ್ಲಿ ಜಲರಾಮ್ ಮಂದಿರದ ಸಮೀಪ ಜೈ ಶಿವಾದರ್ಶನ್ ಸೊಸೈಟಿಯ ನಿವಾಸಿ ಯಾಗಿರುವ ಗಂಜಿಮಠ ಮೊಗರು ಗುತ್ತು ದಯಾನಂದ ಶೆಟ್ಟಿ ಯವರು ಅಲ್ಪಕಲಾದ ಅನಾರೋಗ್ಯ ದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಸ್ವಗ್ರಹದಲ್ಲಿ ನಿಧನ ಹೊಂದಿದರೆಂದು ತಿಳಿಸಲು ವಿಷದಿಸುತ್ತೇವೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಅಳಿಯ ಹಾಗೂ ಮೊಮ್ಮಕ್ಕಳು, ಕುಟುಂಬ ಸದಸ್ಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದು, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಆ ಭಗವಂತನು ಚಿರಶಾಂತಿ ಯನ್ನು ಒದಗಿಸಲಿ ಎಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಹಾಗೂ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Post a Comment