".

Header Ads

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಭಜನಾ ಸಮಿತಿಯ ವರ್ಷಾಚರಣೆ

ಭಜನೆ ಸಂಘಟನೆಯನ್ನು ಬಲಿಷ್ಠ ಗೊಳಿಸಿದೆ ನ್ಯಾಯವಾದಿ ಜಗನ್ನಾಥ್ ಶೆಟ್ಟಿ

ಮುಂಬಯಿ :  ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಕಳೆದ ಎರಡು ವರ್ಷಗಳ ಹಿಂದೆ ಭಜನಾ ಸಮಿತಿಯನ್ನು ಸ್ಥಾಪಿಸಿ ಭಜನಾ ಅಭ್ಯಾಸ ವನ್ನು ನಡೆಸಿ ಮನೆ ಮನೆಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಈ ಸಮಿತಿಯ ಎರಡನೇ ವರ್ಷಾಚರಣೆಯು ಮಾ. 3 ರಂದು ದಿನೇಶ್ ಕಾಮತರ ನಿವಾಸದಲ್ಲಿ ನಡೆಯಿತು. 





ಭಜನೆ ಗುರು ಭುವಾಜಿ ಶ್ರೀಧರ್ ಶೆಟ್ಟಿ ಮೀರಾರೋಡ್ ಅವರ ಮಾರ್ಗದರ್ಶನದಲ್ಲಿ ಭಜನಾ ಅಭ್ಯಾಸ ನಡೆಯುತ್ತಿದ್ದು ಈ ವರ್ಷ ಸಂಭ್ರಮಾಚರಣೆಯನ್ನು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ  ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರತ್ನ  ಕುಲಾಲ್,  ಕಾರ್ಯದರ್ಶಿ ಶ್ರೀಮತಿ ಕುಮರೇಶ್ ಆಚಾರ್ಯ, ಕೋಶಾಧಿಕಾರಿ ಶೀಲ ಎಮ್ ಪೂಜಾರಿ, ಕಾರ್ಯಾಧ್ಯಕ್ಷೆ ರುಗಳಾದ ಗೀತಾ ಜಗನ್ನಾಥ್ ಮೆಂಡನ್, ಲಲಿತ ಎಸ್ ಗೌಡ, ಸಂಧ್ಯಾ ಪ್ರಭು ,ಸಲಹೆಗಾರರಾದ ಭಾರತಿ ವಾಗ್ಲೆ , ಜೊತೆ ಕಾರ್ಯದರ್ಶಿ ಶೋಭಾ ಲಕ್ಷ್ಮಣ್ ರಾವ್ ,ಜೊತೆ ಕೋಶಧಿಕಾರಿಗಳಾದ ನಳಿನಿ  ಕರ್ಕೇರ,  ಜಯಲಕ್ಷ್ಮಿ ನಾಯಕ್, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.  
 ನಂತರ ಸದಸ್ಯರಿಂದ ಭಜನೆ ನಡೆಯಿತು. ರಾತ್ರಿ ಮಹಾ ಮಂಗಳಾರತಿ ನಡೆಯಿತು. ಉಡುಪಿ ಕ್ಯಾಟರ್ಸ್ ನ ಮಾಲಕರಾದ ದಿನೇಶ್ ಕಾಮತ್ ಅವರ ಪ್ರಾಯೋಜಕತ್ವದಲ್ಲಿ ಮಹಾಪ್ರಸಾದ ನಡೆದವು.
 ಪೂಜಾ ಸಮಿತಿಯ  ಅಧ್ಯಕ್ಷ ಅಡ್ವಕೇಟ್ ಜಗನ್ನಾಥ್ ಶೆಟ್ಟಿ, ಉಪಾಧ್ಯಕ್ಷರಾದ ಕುಮರೇಶ್ ಆಚಾರ್ಯ, ಸಂತೋಷ್ ಪೂಜಾರಿ, ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಮೆಂಡನ್,  ಜೊತೆ ಕಾರ್ಯದರ್ಶಿ ಸನತ್ ಪೂಜಾರಿ, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಸದಾನಂದ  ಕೋಟ್ಯಾನ್, ವೇದಮೂರ್ತಿ ರಮೇಶ್  ವಾಗ್ಲೆ , ಸೋಮನಾಥ ವಾಗ್ಲೆ, ಜಯ ಪೂಜಾರಿ ಗೋಪಾಲ್ ಪೂಜಾರಿ,ಯಾವ ವಿಭಾಗದ ಕಾರ್ಯ ಅಧ್ಯಕ್ಷ ಸುದೀಪ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಜನಾ ಮಂಗಳವಾದ ಬಳಿಕ ಸದಸ್ಯರನ್ನು ಉದ್ದೇಶಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನ್ಯಾ ಜಗನ್ನಾಥ್ ಶೆಟ್ಟಿ ಮಹಿಳೆಯರ ಒಗ್ಗಟ್ಟು ಸಂಸ್ಥೆಯನ್ನು ಬಲಿಷ್ಠ ಗೊಳಿಸಿದೆ, ಭಜನೆ ಅಭ್ಯಾಸದ ನಂತರ ಮಲಾಡ  ನ. ಪೂರ್ವದ ಮನೆಗಳಲ್ಲಿ  ಭಜನೆ ನಡೆಯುವಂತಾಗಿದೆ,  ಭಜನೆ ಸಂಘಟನೆಯನ್ನು ಬಲಿಷ್ಠ ಗೊಳಿಸಿದೆ ಎಂದು ನುಡಿದರು,
Powered by Blogger.