ಮುಂಬೈ ಪ್ರೆಸ್ ಕ್ಲಬ್ ನ ಜಯ ಪೂಜಾರಿ ಅವರಿಗೆ ಮಿತ್ರ ಬಳಗದ ವತಿಯಿಂದ ವಿದಾಯ ಕೂಟ
ಮುಂಬೈ ಪ್ರೆಸ್ ಕ್ಲಬ್ ನಲ್ಲಿ 33 ವರ್ಷಗಳ ಕಾಲ ನಿಷ್ಠೆ, ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ , ನಿವೃತ್ತರಾದ ಜಯ ಪೂಜಾರಿ ಅವರಿಗೆ ಮಿತ್ರ ಬಳಗದ ವತಿಯಿಂದ ವಿದಾಯ ಕೂಟವನ್ನು ಮಸ್ಜಿದ್ ಬಂದರ್ ಪೂರ್ವದ ಪಂಚ ತಾರಾ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾರ್ಚ್ 3 ರಂದು ಅಯೋಜಿಸಲಾಗಿತ್ತು.
ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಪ್ರಸಾವಿಕ ಮಾತುಗಳನಾಡುತ್ತಾ , ಜಯ ಪೂಜಾರಿ ಅವರು ಉದ್ಯೋಗ ಮಾಡುತಿದ್ದಂತೆ , ಪತ್ರ ಕರ್ತನಾಗಿ, ಕ್ರಿಕೆಟಿಗನಾಗಿ, ತುಳು-ಕನ್ನಡಿಗರಿಗೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲು ಸಹಕಾರ ನೀಡುತ್ತಾ, ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿದ್ದರು ಎಂದರು.
ಕರ್ನಾಟಕ ಮಲ್ಲದ ಸಂಪಾದಕ ಚಂದ್ರ ಶೇಖರ್ ಪಾಲೇತ್ತಾಡಿ, ಪತ್ರಕರ್ತ ಉಮೇಶ್ ಅಂಚನ್, ನಮನ ಪ್ರೆಂಡ್ಸ್ ನ ರೂವಾರಿ ಪ್ರಭಾಕರ್ ಬೆಳುವಾಯಿ, ತೀಯಾ ಸಮಾಜದ ಗೌರವ ಕಾರ್ಯದರ್ಶಿ ಬಾಬು ಬೆಲ್ಚಡ, ಜಯ ಪೂಜಾರಿ ಅವರ ಸೇವಾ ಕಾರ್ಯಗಳನ್ನು ಸ್ಮರಿಸುತ್ತಾ ಅವರ ಮುಂದಿನ ಬದುಕಿಗೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಮಿತ್ರ ಬಳಗದ ವತಿಯಿಂದ ಜಯ ಪೂಜಾರಿ ಅವರಿಗೆ ಶಾಲು, ನೆನಪಿನ ಕಾಣಿಕೆ, ಫಲ-ಪುಷ್ಪ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.
ಮಿತ್ರರ ಗೌರವ ಸ್ವೀಕರಿಸಿದ ಜಯ ಪೂಜಾರಿ, "ಊರಿನ ಬಾಲ್ಯದ ಜೀವನವನ್ನು, ಆ ಬಳಿಕ ಮುಂಬೈಯಲ್ಲಿ ಬದುಕು ಕಟ್ಟಿಕೊಂಡ ಬಗೆಯನ್ನು ಗೆಳೆಯರ ಮುಂದಿಟ್ಟರು.
ಕರ್ನಾಟಕ ಮಲ್ಲದ ನವೀನ್ ಇನ್ನಾ, ಗುರುದತ್ತ ಪೂಂಜ, ರಮೇಶ್ ಮಾರೋಳಿ, ಉದ್ಯಮಿ ಸುರೇಂದ್ರ ಶೆಟ್ಟಿ , ಛಾಯಾ ಗ್ರಾಹಕ ಜಯೇಶ್ ಗೋಯೆಲ್ ಉಪಸ್ಥಿತರಿದ್ದರು.
ಜಯ ಪೂಜಾರಿ ,ಓರ್ವ ಪ್ರತಿಭಾವಂತ ಕ್ರಿಕೆಟಿಗನಾಗಿ, ರಾಷ್ಟದ ಶ್ರೇಷ್ಠ ಕ್ರಿಕೆಟಿಗರೊಂದಿಗೆ ಆಟ ಆಡುತ್ತಾ, ತುಳು-ಕನ್ನಡಿಗರಿಗಾಗಿ ಕ್ರಿಕೆಟ್ ,ಫುಟ್ಬಾಲ್ ಪಂದ್ಯಾಟ ಅಯೋಜಿಸುತ್ತಿದ್ದರು. ಪತ್ರಿಕೆಗಳಿಗೆ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ಜಯ ಪೂಜಾರಿ ,ಸಾಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆಗೈದವರು. "ಪ್ರೆಸ್ ಕ್ಲಬ್ ಜಯಣ್ಣ" ಎಂದೇ ತುಳು-ಕನ್ನಡಿಗರಿಂದ ಗುರುತಿಸಿಕೊಂಡಿದ್ದರು.
.jpeg)
Post a Comment