ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ,
ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ,
ಕೃಷ್ಣ ಅನುಗ್ರಹ ಇದ್ದರೆ ಎಲ್ಲಾ ಕೆಲಸಗಳು ಸುಲಲಿತ:
ಡಾ| ರಾಮದಾಸ ಉಪಾಧ್ಯಾಯ ರೆಂಜಾಳ
ಚಿತ್ರ ವರದಿ : ದಿನೇಶ್ ಕುಲಾಲ್,
ಮುಂಬಯಿ : ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಶಾಖೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನದಂತೆ, ಶ್ರೀಕೃಷ್ಣ ಜನ್ಮಾಷ್ಟಮಿ ಅಪಾರ ಸಂಖ್ಯೆಯ ಭಕ್ತರ ಕೂಡಿಕೆಯಲ್ಲಿ ಭಕ್ತಿ ಸಂಭ್ರಮದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಗುಡಿಕೆ ಸಪ್ಟಂಬರ್ 7 ರಂದು ಜನ್ಮಾಷ್ಟಮಿ ನಿಮಿತ್ತ ಮಠದಲ್ಲಿದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪೇಜಾವರ ಮಠದ ಬೆಳಿಗ್ಗೆ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಶ್ರೀಕೃಷ್ಣನಿಗೆ ಆರತಿಗೈದು ಮಹಾಮಂಗಳರಾತಿ ಅರ್ಘ್ಯ ಪ್ರಧಾನ ನೆರವೇರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗ ಳೊಂದಿಗೆ ಶ್ರೀಕೃಷ್ಣಾಷ್ಟಮಿಯ ಉತ್ಸವ ರಂಭಗೊಂಡಿತು.
ಸಂಜೆ ಪ್ರಭಾತ್ ಕಾಲೋನಿ ಯಿ oದ ಬಲಿ ಉತ್ಸವದ ಭವ್ಯ ಶೋಭ ಯಾತ್ರೆಯಲ್ಲಿ ಮೀರಾ ರೋಡಿನ ಪುರೋಹಿತ ಸುರೇಶ್ ಭಟ್ ಕುಂಟಾಡಿ ಬಲಿ ಮೂರ್ತಿಯ ದೊಂದಿಗೆ. ದಿನೇಶ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಅಶೋಕ ದೇವಾಡಿಗ ಇವರ ವೃಂದವು ಚೆಂಡೆ, ಸೆಕ್ಸೋಫೆÇೀನ್, ಬ್ಯಾಂಡು ವಾದ್ಯಗಳ , ಹುಲಿ ವೇಷ. ಭಜನೆ ಎಂದಿಗೆ ಪೇಜಾವರ ಮಠಕ್ಕೆ ಆಗಮಿಸಿದರು, ಮಠದ ದ್ವಾರದಲ್ಲಿ ದ೦ಹಿ ಹ0 ಡಿಯನ್ನು ಕೃಷ್ಣ ವೇಷದಾರಿಗಳು ಒಡೆದರು,
ಉತ್ಸವ ಮೆರವಣಿಗೆಯ ಬಳಿಕ ವಿಶೇಷವಾಗಿ ಶ್ರೀ ಕೃಷ್ಣನ ವೇಷಧರಿಸಿದ ಮಕ್ಕಳಿಗೆ ಮಠದ ವತಿಯಿಂದ ಗೌರವಿಸಿದ ಪೇಜಾವರ ಮಠದ ಪ್ರಬಂಧಕರಾದ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಶ್ರೀ ಕೃಷ್ಣನ ಮಹಾತ್ಮೆ ಬಗ್ಗೆ ಹೇಳುತ್ತಾ ಶ್ರೀಕೃಷ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ದೇವರು ಆತನ ಅನುಗ್ರಹವಿದ್ದರೆ ಎಲ್ಲಾ ಕೆಲಸಗಳು ಸುಲಲಿತವಾಗಿ ಸಾಗುತ್ತದೆ ಎಂದರು,
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಿರಿಯ ಭಾಗವತ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಭಾಗವತಿಕೆಯಲ್ಲಿ, ಡಾ| ಸುರೇಂದ್ರಕುಮಾರ್ ಹೆಗ್ಡೆ ಅವರ ಪ್ರಧಾನ ಅಭಿನಯದಲ್ಲಿ ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಮಂಡಳಿ ಮುಂಬಯಿ `ಕೃಷ್ಣ ಲೀಲೆ ಕಂಸ ವಧೆ' ಯಕ್ಷಗಾನ ಪ್ರದರ್ಶಿಸಿತು.
ರಾತ್ರಿ ಪುಷ್ಪಾಲಂಕಾರಗಳೊಂದಿಗೆ ಶೃಂಗಾರಿಸಿದ್ದು
ಶ್ರೀಕೃಷ್ಣನಿಗೆ ಪುರೋಹಿತ ವಿಷ್ಣುತೀರ್ಥ ಸಾಲಿ ಅವರು
ಮಹಾ ಪೂಜೆ, ಮಹಾ ಮಂಗಳಾರತಿ ನಡೆಸಿದರು ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ, ವಿದ್ವಾನ್ ಶ್ರೀಹರಿ ಭಟ್, ನಿರಂಜನ್ ಜೆ. ಗೋಗ್ಟೆ , ರಾಮದಾಸ ಉಪಾಧ್ಯಾಯ .
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಮುಂಬಯಿ) ಇದರ ವಿಶ್ವಸ್ಥರು, ಪದಾಧಿಕಾರಿಗಳು, ಪೇಜಾವರ ಮಠದ ಮುಂಬಯಿ ಇದರ ಪುರೋಹಿತರಾದ ಪವನ್ ಭಟ್ , ರಾಮಚಂದ್ರ ಸಾಮಗ, ರಾಘು ಭಟ್ ಮತ್ತಿತರ ಪುರೋಹಿತರು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥರು, ಶೇಖರ್ ಜೆ.ಸಾಲಿಯಾನ್ ಸೇರಿದಂತೆ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು,
ರಾತ್ರಿ ಮಹಾಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಅನ್ನದಾನ ನಡೆಯಿತು
Post a Comment