ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನಿಮಾತ್ಮ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ,
ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನಿಮಾತ್ಮ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ,
ಪೂಜಾ ಸಮಿತಿಯ ಸ್ವರ್ಣ ಮಹೋತ್ಸವ ಸಂಭ್ರಮ ಒಗ್ಗಟ್ಟಿನಲ್ಲಿ ಆಚರಿಸೋಣ: ಶ್ರೀನಿವಾಸ ಸಾಪಲ್ಯ,
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ - ಮಲಾಡ್. ಪೂರ್ವದ ಕುರರ್ ವಿಲೇಜನ ಲಕ್ಷ್ಮಣ ನಗರ ದ ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದ ಆಡಳಿತ ಸಂಸ್ಥೆ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆಯು ಮಹಾಸಭೆಯು ಸೆಪ್ಟಂಬರ್ 3ನೇ ಆದಿತ್ಯವಾರದಂದು ಕುರಾರ್ ಸೆಂಟ್ ಪ್ರಾನ್ಸಿಸ್ ಸ್ಕೂಲಿನಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಸಾಪಲ್ಯರ ಅಧ್ಯಕ್ಷತೆಯಲ್ಲಿ ನಡೆಯಿತು,
ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ಸದಸ್ಯೆಯರಿಂದ ಪ್ರಾರ್ಥನೆ ನಂತರ 2022-2023ರ ವರದಿಯನ್ನು ಗೌರವ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸಭೆಗೆ ಮಂಡಿಸಿದರು ಹಾಗೂ ಲೆಕ್ಕಪತ್ರವನ್ನು ಕೋಶಧಿಕಾರಿ ಹರೀಶ್ ಜೆ ಸಾಲಿಯಾನ್ ಓದಿ ಹೇಳಿದರು,
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ
ಶ್ರೀನಿವಾಸ ಸಾಪಲ್ಯರು ಪೂಜಾ ಸಮಿತಿಯು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ದೇವಸ್ಥಾನದಲ್ಲಿ ವ್ಯಕ್ತಿ ಪೂಜೆ ಇಲ್ಲ ಭಕ್ತಿ ಪೂಜೆ , ಪೂಜೆಗಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲರೂ ಒಂದೇ ಸಮಾನ, ಪೂಜಾ ಸಮಿತಿ ಸ್ವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಎಲ್ಲರು ಒಟ್ಟಾಗಿ ಕೆಲಸ ಮಾಡಿ ಮುಂದಿನ ವರ್ಷ ಸ್ವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದು ತಿಳಿಸಿ ದೇವಸ್ಥಾನದಲ್ಲಿ ನಡೆಯುತ್ತಿರುವ ಸ್ವರ್ಣ ಮಹೋತ್ಸವದ ಕಾರ್ಯಕ್ರಮದ ಬದ್ರಿನಾಥ ಯಾತ್ರೆಯ ಬಗ್ಗೆ ವಿಸ್ತಾರವಾಗಿ ತಿಳಿಸಿ. ಸ್ವರ್ಣ ಮಹೋತ್ಸವ ಸಂಭ್ರಮ ಒಗ್ಗಟ್ಟಿನಲ್ಲಿ ಆಚರಿಸೋಣ ಎಂದರು,
ಸಮಿತಿಯಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್ ಮಹಿಳಾ ವಿಭಾಗದ ಕಾರ್ಯ ಚಟುವಟಿಕೆಗಳು ತಿಳಿಸಿ ,ದೇವಸ್ಥಾನದಲ್ಲಿ ನಡೆಯುವ ಸೇವಾ ಕಾರ್ಯಗಳಿಗೆ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು,
ವಾರ್ಷಿಕ ಸಭೆ ನಡೆದ ಬಳಿಕ ಶ್ರೀ ಶನಿಮಹಾತ್ಮ ಚಾರಿಟೇಬಲ್ ಸೊಸೈಟಿ ಸಮಿತಿಯ ಸಭೆ ಯ ಸೊಸೈಟಿಯ ಕಾರ್ಯ ಧ್ಯಕ್ಷ ಪ್ರಭಾಕರ್ ಶೆಟ್ಟಿ ಗೊರೇಗಾವ್ ವಹಿಸಿ ಮಾತನಾಡುತ್ತಾಈ ಸಂಸ್ಥೆಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು ಪೂಜಾ ಸಮಿತಿಯ ಒಂದು ಅಂಗವಾಗಿ ಕೆಲಸ ಮಾಡುತ್ತಿದೆ, ಪರಿಸರದ ವಿದ್ಯಾರ್ಥಿಗಳಿಗೆ ಭಾಷೆ ಯನ್ನು ಮರೆತು ಎಲ್ಲಾ ವಿದ್ಯಾರ್ಥಿಗಳಿಗೆ ನೆರವು, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ನೀಡುವ ಮೂಲಕ ಅವರಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ, ದೇವಸ್ಥಾನದ ಮೂಲಕ ಧಾರ್ಮಿಕ ಕೆಲಸ ಮತ್ತು ಸಾಮಾಜಿಕ ಕೆಲಸ ಮಾಡುವುದಕ್ಕೆ ಸದಸ್ಯರೆಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು,
ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಮೇಶ್ ಆಚಾರ್ಯ ,ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಸಾಲ್ಯಾನ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್ ಉಪಸ್ತರಿದ್ದರು,
ಈ ಸಂದರ್ಭದಲ್ಲಿ 2022-23ರಲ್ಲಿ ಉತ್ತೀರ್ಣರಾದ
ಸಮಿತಿಯ ಸದಸ್ಯರ ಮಕ್ಕಳು ದ ತನು ಪ್ರಭಾಕರ್ ಶೆಟ್ಟಿ. ಲಹರಿ ಸುರೇಶ್ ಸಾಲ್ಯಾನ್. ಲಾಸ್ಯ ದಿನೇಶ್ ಕುಲಾಲ್. ಮಿತಾಶ ಸಂತೋಷ್ ಮೆಂಡನ್. ಇವರಿಗೆ ಗೌರವದೊಂದಿಗೆ ಪ್ರೋತ್ಸಾಹ ಧನ ನೀಡಲಾಯಿತು.
ದೇವಸ್ಥಾನದ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿ , ರಮೇಶ ರಾವ್ , ಜ್ಯೋತಿ ಹೋಟೆಲ್ ಮಾಲೀಕರಾದ ಸುರೇಶ್ ಶೆಟ್ಟಿ. ವಿಶ್ವನಾಥ್ ಶೆಟ್ಟಿ ಪೇತ್ರಿ , ಮಹಿಳಾ ವಿಭಾಗದ ಭವಾನಿ ಕುಂದರ್ ಸಭೆಯಲ್ಲಿ ಮೆಚ್ಚುಗೆಯ ಹಿತನುಡಿಗಳನ್ನಡಿದರು,
ಈ ಸಂದರ್ಭದಲ್ಲಿ ಸ್ವರ್ಣ ಮಹೋತ್ಸವದ ಧನಸಂಗ್ರಹಕ್ಕಾಗಿ ಅಕ್ಟೋಬರ್ 1ರಂದು ಕುರ್ಲಾ (ಪೂ). ಬಂಟರ ಭವನ ಇಲ್ಲಿ ಕಲಾಸಂಗಮದ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ "ಶಿವದೂತೆ ಗುಳಿಗೆ " ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನದ ಪ್ರವೇಶ ಪತ್ರವನ್ನು ಪೂಜಾ ಸಮಿತಿಯ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು,
. ಸಭೆಯಲ್ಲಿ ಸಮಿತಿಯ ನಿತ್ಯಾನಂದ ಕೋಟ್ಯಾನ್. ಚಂದ್ರ ಕುಮಾರ್ ಶೆಟ್ಟಿ. ಸದಾನಂದ ಶೆಟ್ಟಿ. ಶಾಲಿನಿ ಶೆಟ್ಟಿ. ಮಹೇಶ್ ಸಾಲ್ಯಾನ್, ರಾಜಶ್ರೀ ಪೂಜಾರಿ. ಮನೋಹರ ಶೆಟ್ಟಿ. ದಯಾನಂದ ಶೆಟ್ಟಿ. ಹಾಗೂ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಭೋಜನದ ವ್ಯವಸ್ಥೆ ಮಾಡಲಾಗಿತ್ತು*
Post a Comment