".

Header Ads

ಕುಂದಾಪುರ: ವೈದ್ಯೆಗೆ ಕಿರುಕುಳ : ಆರೋಪಿ ವೈದ್ಯಾಧಿಕಾರಿ ಗುಜರಾತಿನಲ್ಲಿ ಅರೆಸ್ಟ್

 


ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ವಿರುದ್ಧ ವೈದ್ಯೆ ಒಬ್ಬರಿಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯ ಕರ್ತವ್ಯಕ್ಕೆ ಹೊಸದಾಗಿ ಸೇರಿದ ವೈದ್ಯೆಗೆ ಕಳೆದ 8 ತಿಂಗಳಿನಿಂದ ವಾಟ್ಸಾಪ್‌ನಲ್ಲಿ ತಡರಾತ್ರಿ ನಿರಂತರ ಅಶ್ಲೀಲ ಚಾಟ್‌ಗಳನ್ನು ಮಾಡುತ್ತಾ, ಸ್ಟೇಟಸ್‌ನ ಫೋಟೊಗಳನ್ನು ಸೇವ್‌ ಮಾಡಿ ಅದಕ್ಕೆ ಅಶ್ಲೀಲ ಕಮೆಂಟ್‌ಗಳನ್ನು ಕಳುಹಿಸಿ, ದುಬಾರಿ ಹೊಟೇಲ್‌ಗೆ ಕರೆದೊಯ್ಯುತ್ತೇನೆ ಎಂದು ಕರೆಯುತ್ತಿದ್ದರು. ಪ್ರಭಾವಿಗಳ ಜತೆ, ರಾಜಕಾರಣಿಗಳ ಜತೆ ಇರುವ ಫೋಟೊಗಳನ್ನು, ವಿದೇಶದಲ್ಲಿ ಹೊಟೇಲ್‌ನಲ್ಲಿ ಬೇರೆ ಹೆಣ್ಣು ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ ಫೋಟೊಗಳನ್ನು ಕಳುಹಿಸಿ ನೀನು ಬಾ ಎನ್ನುತ್ತಿದ್ದರು.

ಉದ್ಯೋಗ ಉಳಿಸಿಕೊಳ್ಳುವ ಸಲುವಾಗಿ ವೈದ್ಯೆ ಮಾನಕ್ಕೆ ಹೆದರಿ ಸುಮ್ಮನಿದ್ದರೂ, ಅವರ ಮೇಲೆ ಬೇರೆ ವೈದ್ಯರು, ಸಿಬಂದಿ ಜತೆ ಸಂಭಾಷಣೆ ನಡೆಸಿದ್ದಕ್ಕೆ ಕೆಟ್ಟಪದ ಪ್ರಯೋಗ ಮಾಡಿ ಸುಳ್ಳು ಅಪವಾದ ಹೇರಿ ತಲೆಗೆ ಕಟ್ಟಿದ್ದಾರೆ ಎಂದು ದೂರಲಾಗಿ ಪ್ರಕರಣ ದಾಖಲಾಗಿತ್ತು

ತನ್ನ ಸಹೋದ್ಯೋಗಿ ವಿವಾಹಿತ ವೈದ್ಯೆಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ, ಕುಂದಾಪುರ ಸರ್ಕಾರೀ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರನ್ನು ಪೊಲೀಸರು ಗುಜರಾತಿನ ಲಾಡ್ಜ್ ಒಂದರಲ್ಲಿ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಮೊಬೈಲ್ ಇಂಟರ್ನೆಟ್ ನೆಟ್ ವರ್ಕ್ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಗುಜರಾತಿ ನಿಂದ ಆರೋಪಿಯನ್ನು ಪೊಲೀಸರು ರೈಲಿನಲ್ಲಿ ಕರೆತಂದಿದ್ದು ಶುಕ್ರವಾರ ರಾತ್ರಿ 10:00 ಸುಮಾರಿಗೆ ಕುಂದಾಪುರಕ್ಕೆ ಆಗಮಿಸಿದ್ದಾರೆ ಪ್ರಕರಣದ ಬಗ್ಗೆ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Powered by Blogger.