".

Header Ads

ಮತ್ತು ಭರಿಸುವ ಇಂಜೆಕ್ಷನ್ ನೀಡಿ ದನಗಳ ಕಳ್ಳತನ: ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

 


ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿ ದನಗಳಿಗೆ ಮತ್ತು ಭರಿಸುವ ಇಂಜೆಕ್ಷನ್ ನೀಡಿ ದನಗಳ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ದನಕಳ್ಳರಿಂದ ಕಳ್ಳತನದಲ್ಲಿ ಹೊಸ ಪ್ರಯೋಗಗಳು ಆರಂಭವಾಗಿದ್ದು, ಇದೀಗ ದನಗಳಿಗೆ ಮತ್ತು ಭರಿಸುವ ಇಂಜೆಕ್ಷನ್ ನೀಡಿ ದನಗಳ ಕಳ್ಳತನ ಮಾಡಲಾರಂಭಿಸಿದ್ದಾರೆ. ಅರಂತೋಡಿನಲ್ಲಿ ರಸ್ತೆ ಬದಿಯಲ್ಲಿರುವ ದನಗಳಿಗೆ ಇಂಜೆಕ್ಷನ್ ನೀಡಿ ಬಳಿಕ ದನಗಳನ್ನು ಯಾವುದೇ ಪ್ರತಿರೋಧವಿಲ್ಲದೆ ಸುಲಭವಾಗಿ ವಾಹನಕ್ಕೆ ತುಂಬಿಸಿ ಸಾಗಿಸುವ ವಿಡಿಯೋ ವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ

ಮತ್ತು ಭರಿಸಿದ ಕಾರಣ ಯಾವುದೇ ಪ್ರತಿರೋಧವಿಲ್ಲದೆ ದನಗಳನ್ನು ಸುಲಭವಾಗಿ ಸ್ಕೋರ್ಪಿಯೋ ಕಾರು ಮತ್ತು ಇತರ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುವ ದೃಶ್ಯ ಅರಂತೋಡಿನ ಮನೆಯೊಂದರ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ದನಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಆಗ್ರಹ ಮಾಡಿದೆ.

Powered by Blogger.