ಹಿರಿಯರ ಸಂಸ್ಕಾರ -ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳಿ-ಶಾರದಾ ಎ. ಅಂಚನ್
ಬಿಲ್ಲವ ಸಂಘ,ಬ್ರಹ್ಮಶ್ರೀ ಶ್ರೀ ನಾರಾಯಣಗುರು ಸೇವಾ ಸಮಿತಿ,ಪಿಂಪ್ರಿ-ಚಿಂಚ್ವಾಡ್ ವಾರ್ಷಿಕ ಸಭೆ ಹಾಗೂ ಸ್ನೇಹ ಸಮ್ಮಿಲನ
ನಮ್ಮ ಹಿರಿಯರು ಸಂಸ್ಕಾರಯುತವಾಗಿ ಮೂಲ ಸಂಸ್ಕೃತಿಗೆ ಒತ್ತು ಕೊಟ್ಟು ಜೀವನ ನಡೆಸಿದವರು. ಆದರೆ ಇಂದು ನಾವೆಲ್ಲ ವಿದ್ಯಾವಂತರಾಗಿ, ಆರ್ಥಿಕವಾಗಿ ಬಹಳಷ್ಟು ಮುಂದುವರೆದಿದ್ದರೂ, ಧರ್ಮ ಪಾಲನೆ ಮತ್ತು ಆಚರಣೆಯಲ್ಲಿ ಹಿಂದುಳಿದ್ದೇವೆ.ಆಧುನಿಕತೆಯ ಜೊತೆ ಜೊತೆಗೆ ನಮ್ಮ ಮನಸ್ಥಿತಿ ಕೂಡಾ ವಿಶಾಲವಾಗಬೇಕಿತ್ತು ಆದರೆ ನಾವು ವಿಕಾರತೆಗೆ ತಿರುಗಿದ್ದೇವೆ. ಇದಕ್ಕೆ ಸಾಕ್ಷಿ ಇಂದು ಸಮಾಜದಲ್ಲಿ ನಡೆಯುತ್ತಿರುವ ಆಘಾತಕಾರಿ ಸಂಗತಿಗಳು ,ಅವ್ಯವಸ್ಥೆಗಳು. ಹಿರಿಯರಿಂದ ಬಳುವಳಿಯಾಗಿ ಬಂದ ಕಲೆ- ಸಂಸ್ಕೃತಿ, ಆಚಾರ- ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಅಗತ್ಯ ಇದೆ.ಆದರೆ ಇಂದು ಆ ಕೆಲಸ ಆಗುತ್ತಿಲ್ಲ. ತುಳುನಾಡ ಭಾಷೆ- ಕಲೆ- ಸಂಸ್ಕೃತಿ ಜೊತೆಯಲ್ಲಿ ನಮ್ಮ ದೈವಾರಾಧನೆ,ನಾಗಾರಾಧನೆ, ಪ್ರಕೃತಿಯೊಂದಿಗಿನ ಬದುಕು ಎಲ್ಲವೂ ಮೂಲ ನಂಬಿಕೆಯೊಂದಿಗೆ ನಡೆದು ಬರುತ್ತಿದೆ. ಒಟ್ಟಾರೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳದಿದ್ದರೆ ಆಗುವ ತೊಂದರೆಗಳು ಬಹಳ" ಎಂದು ಮುಂಬಯಿಯ ಖ್ಯಾತ ಲೇಖಕಿ,ಸಾಹಿತಿ ಶಾರದಾ ಅಂಚನ್ ಕೊಡವೂರು ತಿಳಿಸಿದರು. ಪಿಂಪ್ರಿ ಸಂತ ತುಕಾರಾಂ ನಗರದ ಆಚಾರ್ಯ ಅತ್ರೆ ರಂಗ ಮಂದಿರದಲ್ಲಿ ಇತ್ತೀಚೆಗೆ ಬಿಲ್ಲವ ಸಂಘ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಮಿತಿ ಪಿಂಪ್ರಿ-ಚಿಂಚ್ವಾ ಡ್ ವಾರ್ಷಿಕ ಸಭೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಅವರು ಮಾತನಾಡಿದರು.
ಇನ್ನೋರ್ವ ಅಥಿತಿ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ ವಿನ್ನರ್ ಪ್ರತಿಭಾ ಸಾಲಿಯಾನ್ "ಸಂಘದ ಪ್ರತಿಯೊಂದು ಕಾರ್ಯಕ್ರಮವು ಸಂಘದ ಒಗ್ಗಟ್ಟು ಹಾಗೂ ಸಮಾಜ ಬಾಂಧವರ ಸಹಕಾರದಿಂದ ಸಾಧ್ಯವಾಗುತ್ತದೆ .ಸಂಘದ ಕಾರ್ಯಕ್ರಮಗಳಿಗೆ ನಮ್ಮ ಮಕ್ಕಳನ್ನು ಕರೆತರುವ ಮೂಲಕ ಅವರಲ್ಲಿಯೂ ಸಂಸ್ಕೃತಿಯನ್ನು ಬೆಳೆಸಬೇಕು'' ಎಂದರು.ಇನ್ನೋರ್ವ ಅಥಿತಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಅವರು "ಸಂಘದ ಕಾರ್ಯ ವೈಕರಿಯು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ "ಎಂದರು,ಸಂಘದ ಅಧ್ಯಕ್ಷ ನವೀನ್ ಕೋಟ್ಯಾನ್ ಮಾತಾಡುತ್ತಾ "ಸಂಘದ ಪ್ರತಿಯೊಂದು ಕಾರ್ಯಕ್ರಮವು ಶಿಸ್ತುಬದ್ಧವಾಗಿ, ಮಾದರಿಯಾಗಿ ನಡೆಯುವಲ್ಲಿ ನಮ್ಮ ಸಂಘದ ಉತ್ಸಾಹಿ ಸದಸ್ಯರು, ಮಹಿಳಾ,ಯುವ ವಿಭಾಗದವರ ನಿಸ್ವಾರ್ಥ ಸೇವಾ ಕಾರ್ಯಗಳಿಂದ ಸಾಧ್ಯವಾಗಿದೆ. ಪ್ರತೀ ವರ್ಷವೂ ಹೊಸ ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಸಂಘವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ"ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಸುವರ್ಣ,ಕೋಶಾಧಿಕಾರಿ ಪ್ರವೀಣ್ ಅಂಚನ್, ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಂಚನ್, ಮಾಜಿ ಅಧ್ಯಕ್ಷೆ ಭವಂತಿ ಪೂಜಾರಿ,ಸಂಘದ ಉಪಾಧ್ಯಕ್ಷರಾದ ಉಮೇಶ್ ಪೂಜಾರಿ, ಮೀನಾಕ್ಷಿ ಪೂಜಾರಿ, ಜೊತೆ ಕಾರ್ಯದರ್ಶಿ ಸಂತೋಷ್ ಪೂಜಾರಿ,ಜೊತೆ ಕೋಶಾಧಿಕಾರಿ ಶರತ್ ಕೋಟ್ಯಾನ್ , ಕ್ರೀಡಾ ಕಾರ್ಯದರ್ಶಿಗಳಾದ ಸತೀಶ್ ಸಾಲಿಯಾನ್,ಗೌರಿ ಸಾಲಿಯಾನ್, ಕ್ರೀಡಾ ಜೊತೆ ಕಾರ್ಯದರ್ಶಿ ಶೇಖರ್ ಜತ್ತನ್, ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ್ ಪೂಜಾರಿ, ಅರ್ಚಕ ಸಮಿತಿಯ ಪ್ರಮುಖರಾದ ಶೇಖರ್ ಪೂಜಾರಿ ಚಿತ್ರಾಪು, ಸತೀಶ್ ಪೂಜಾರಿ,ಉಮೇಶ್ ಪೂಜಾರಿ, ಸಂತೋಷ್ ಪೂಜಾರಿ,ಶೇಖರ್ ಜತ್ತನ್, ಸುರೇಶ ಪೂಜಾರಿ,ಗಣೇಶ್ ಅಂಚನ್,ರಘು ಪೂಜಾರಿ, ಸತೀಶ್ ಪೂಜಾರಿ,ಸುರೇಶ ಪೂಜಾರಿ,ರವೀಂದ್ರ ಜತ್ತನ್, ಈಶ್ವರ್ ಸನಿಲ್,ಗಣೇಶ್ ಅಂಚನ್, ಕಿರಣ್ ಸುವರ್ಣ,ಅರುಣಾ ಪೂಜಾರಿ, ರಘು ಪೂಜಾರಿ, ಗಣೇಶ್ ಕೋಟ್ಯಾನ್, ಆನಂದ ಪೂಜಾರಿ, ಸುರೇಶ ಪೂಜಾರಿ ಚಿಂಚ್ವಾಡ್,ಪ್ರವೀಣ್ ಸಾಲಿಯಾನ್,ಹಾಗೂ ಯುವ ವಿಭಾಗದ ಉಪಾಧ್ಯಕ್ಷೆ ಪೂಜಾ ಕಮಲೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಂಘದ ಸಾಮಾಜಿಕ ಸೇವಾ ಕಾರ್ಯಗಳ ಪ್ರಯುಕ್ತ ಒಂಟಿ ಪಾಲಕ ಕುಟುಂಬ,ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಧನ ಸಹಾಯ ವಿತರಿಸಲಾಯಿತು, ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಪಡೆದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಸಂಘದ ಸದಸ್ಯರಿಂದ, ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ನೂತನ್ ಸುವರ್ಣ ನಿರೂಪಿಸಿದರು ಹಾಗೂ ಗೌರಿ ಸಾಲಿಯಾನ್ ವಂದಿಸಿದರು.

.jpeg)
Post a Comment